________________
೧೬೬ | ಪಂಪಭಾರತಂ ಚಂ|| ಮನದೊಳಲಂಪು ಪೂ ನುಡಿದುಂ ನಡೆ ನೋಡಿಯುಮಾಟಪಾಟಮಂ
ಬನದಮುಮಾರುಮಂ ಮಯಿಸುತ್ತಿರೆ ಬೀದಿಗಳೊಳ್ ವಿಳಾಸದೊ | ಡೆನಿಸಿ ತೋಬಲ್ಯ ಪಾಂಡವರ ಪೋಗಿನೊಳುಂತೆ ಬೆಡಂಗುಗೆಟ್ಟು ಹ ಸಿನಪುರಮಿಂದು ರಕ್ಕಸನ ತಿಂದ ಪೋಬಲೈಸೆಯಾಗದಿರ್ಕುಮೇ | ೯೪
ವ|| ಎಂದು ಕಣ್ಣನೀರಂ ನೆಗಪ
ಚಂ|| ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧು ವಾದದೊಳ್
ಬೆರಸಿ ಸಮಂತು ಸೂಸುವ ಜಲಾದ್ರ್ರಲಸದವಳಾಕ್ಷತಂಗಳೊಳ್ | ಬೆರಸಿದ ತಣ್ಣನೆ ಕವಿದತ್ತಿದ ಬಾಸಿಗರೊಂದು ಕಂಪಿನೊಳ್, ಪೊರೆದು ಮದಾಳಿಗಳೊರಸು ಬಂದುದದೊಂದನುಕೂಲ ಮಾರುತಂ || ೯೫
ವ|| ಅಂತು ಪೊಬಲಂ ಪೊಜಮದ ಬಳೆಯನೆ ತಗುಳು ಬರ್ಪ ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ ನಗೆಯ ತಗಟಿನವರನಮ್ಮ ಬಳಿಯಟ್ಟಿದಂದು ಬನ್ನಿಮಂದು ಪ್ರಿಯಂ ನುಡಿದಿರಿಸಿ ಕಿದಂತರಂ ಬಂದೊಂದು ತಾವರೆಗಳಿಯ ಮೊದಲೊಳ್ ನಿಂದು ಭೀಷ್ಮ ದ್ರೋಣ ಕೃಪ ವಿದುರರ್ಕಳನಮಗೆ ತಕ್ಕ ಬುದ್ದಿಯಂ ಪೇಯ್ದು ಮಗುಮನೆ- .
೯೪. ಮನಸ್ಸಿನಲ್ಲಿ ಸಂತೋಷವುಕ್ಕುವಂತೆ ಮಾತನಾಡಿಯೂ ದೀರ್ಘದೃಷ್ಟಿಯಿಂದ ನೋಡಿಯೂ ತಮ್ಮ ಆಟಪಾಟವಿನೋದಗಳಿಂದ ಯಾರನ್ನಾದರೂ ಮೈಮರೆಯುವಂತೆ ಮಾಡಿಯೂ ಬೀದಿಗಳಲ್ಲಿ ಸೌಂದರ್ಯದ ಪುಂಜವೆಂದೆನಿಸಿಕೊಂಡು ತಿರುಗಾಡುತ್ತಿದ್ದ ಪಾಂಡವರು ಊರನ್ನು ಬಿಟ್ಟು ಹೋಗುವುದರಿಂದ ಹಸ್ತಿನಾಪಟ್ಟಣವು ವೈಭವಶೂನ್ಯವಾಗಿ ರಾಕ್ಷಸನು ತಿಂದುಳಿದ ಪಟ್ಟಣಕ್ಕೆ ಸಮಾನವಾಗುವುದಿಲ್ಲವೇ ವ! ಎಂದು ಕಣ್ಣೀರನ್ನು ಸುರಿಸಿದರು. ೯೫, ಆಶೀರ್ವಾದವನ್ನು ಮಾಡುತ್ತಿರುವ ಊರಹಿರಿಯರ ಮತ್ತು ಕುಲಸ್ತೀಯರ ಸ್ವಸ್ತಿವಾಚನಗಳಿಂದಲೂ ವಿಶೇಷವಾಗಿ ಚೆಲ್ಲುತ್ತಿರುವ ಮನೋಹರವೂ ಧವಳವರ್ಣಯುಕ್ತವೂ ಆದ ಆದ್ರ್ರಾಕ್ಷತೆಗಳಿಂದಲೂ ತಂಪಿನಿಂದಲೂ ಕಂಪಿನಿಂದಲೂ ಎತ್ತಿ ಕಟ್ಟಿದ ಬಾಸಿಂಗದ ಸುಗಂಧದಿಂದಲೂ ಮದಿಸಿದ ದುಂಬಿಗಳಿಂದಲೂ ಕೂಡಿದ ಹಿತವಾದ ಗಾಳಿಯೊಂದು (ಪಾಂಡವರಿಗೆ ಶುಭಸೂಚಕವಾಗಿ) ಬೀಸಿತು. ವ|| ಹಾಗೆ ಪಟ್ಟಣವನ್ನು ಬಿಟ್ಟು ಹೊರ ಹೊರಡಲು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಸಹಪಾಠಿಗಳನ್ನೂ ನಕಲಿಯವರನ್ನೂ ಹಾಸ್ಯಗಾರರನ್ನೂ ದೂಷಣೆಮಾಡುತ್ತಿದ್ದವರನ್ನೂ ಪಾಂಡವರು 'ನಾವು ಹೇಳಿಕಳುಹಿಸಿದಾಗ ಬನ್ನಿ' ಎಂದು ಒಳ್ಳೆಯ ಮಾತನ್ನಾಡಿ ನಿಲ್ಲಿಸಿ ಕೊಂಚ ದೂರ ಬಂದು ಒಂದು ತಾವರೆಯ ಕೆರೆಯ ಅಂಚಿನಲ್ಲಿ ನಿಂತು ಭೀಷ್ಮ, ದ್ರೋಣ ಕೃಪ ವಿದುರರುಗಳನ್ನು ನಮಗೆ ಬುದ್ದಿವಾದಗಳನ್ನು ತಿಳಿಸಿ ದಯಮಾಡಿ' ಎಂದರು.