________________
ದ್ವಿತೀಯಾಶ್ವಾಸಂ | ೧೪೯
ಶರಸಂಧಾನದೊಳವಯವದೊಳ ತೆಗೆದೊಡನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗಪಿದೊಡ ನದೀತನೂಜಂ ಭಾರದ್ವಾಜಂಗೆ ಬಲೆಯನಟ್ಟಿ ಬರಿಸಿ ಪೂರ್ವ ಸಂಭಾಷಣಾರ್ಘಮತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಾದಿಗಳಿಂ ಸಂತಸಂಬಡಿಸಿ ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು
ಮ||
4.
ಮದಮಂ ಮುಕ್ಕುಳಿಸಿರ್ದಿಭಂಗಳನುದಗ್ರಾಶ್ವಂಗಳಂ ತಕ್ಕಿನ ಗದ ಬಾಡಂಗಳನಾಯ್ಡು ಕೊಟ್ಟು ತಣಿದಂ ಪೋ ಸಾಲುಮಂಬನ್ನಮಂ | ದಿದಿರೊಳ್ ನೂಲುವ ಕುಮಾರರುಮನಿಟ್ಟ ಕೂಸುಗಳ ಯೋಗ್ಯರ ಪುದನಿನ್ನೊಳ್ಕೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ || ವ|| ಎಂಬುದುಮಂತೆಗೆಯ್ಯನೆಂದು ಕಲಶಜನನಿಬರ ಮೊಗಮಂ ನೋಡಿ
ಕಂ
ಈ ನೆರದಿನಿಬರುಮಂದುದ
ನೇನೀವಿರ ಪೇಟೆಮಂದೊಡನಿಬರುಮಿರ್ದರ್ |
ಮೌನವ್ರತದ ಗುಣಾರ್ಣವ
ನಾನೀಂ ನಿಮ್ಮ ಬಯಸಿ ಬೇಯ್ದುದನೆಂದಂ ||
9:2
೫೪
ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಟಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆಂದಂ
ಲಕ್ಷ್ಯವನ್ನು ತೆಗೆ ಎಂದನು. ಅವನು 'ಹಾಗೆಯೇ ಮಾಡುತ್ತೇನೆ' ಎಂದು ನೈಷ್ಠಿಕವೆನ್ನುವ ಮುಷ್ಟಿಯಿಂದ ಬಾಣದ ಒಂದು ಗರಿಯನ್ನನುಸರಿಸಿ ಮತ್ತೊಂದು ಬಾಣಬಿಡುವ ಪ್ರಯೋಗದಿಂದ ನಿರಾಯಾಸವಾಗಿ ಮೇಲಕ್ಕೆತ್ತಿದನು. ಅಷ್ಟುಮಂದಿಯೂ ಆಶ್ಚರ್ಯಪಟ್ಟು (ಆ ವಿಷಯವನ್ನು) ಭೀಷ್ಮ ಧೃತರಾಷ್ಟ್ರರಿಗೆ ತಿಳಿಸಿದರು. ಭೀಷ್ಮನು ದ್ರೋಣಾಚಾರ್ಯರಿಗೆ ಹೇಳಿ ಕಳುಹಿಸಿ ಬರಮಾಡಿ ಕುಶಲ ಸಂಭಾಷಣಾಪೂರ್ವಕ ಅರ್ಥ್ಯವನ್ನು ಕೊಟ್ಟು ಮಧುಪರ್ಕ, ವೇತ್ರಾಸನ, ತಾಂಬೂಲದಾನಾದಿಗಳಿಂದ ಸಂತೋಷಪಡಿಸಿ ಆತನ ಕುಲ, ವಿದ್ಯೆ ಮತ್ತು ವೃತ್ತಿಗಳನ್ನು ಪ್ರಶ್ನೆಮಾಡಿ ತಿಳಿದುಕೊಂಡನು. ೫೩. ಮದವನ್ನು ಉಗುಳುತ್ತಿರುವ ಆನೆಗಳನ್ನೂ (ಮದ್ದಾನೆಗಳನ್ನು) ಉತ್ತಮವಾದ ಕುದುರೆಗಳನ್ನೂ ಯೋಗ್ಯವೂ ಶ್ರೇಷ್ಠವೂ ಆದ ಗ್ರಾಮಗಳನ್ನೂ 'ತೃಪ್ತನಾದೆ, ಸಾಕು, ಹೋಗು' ಎನ್ನುವಷ್ಟು ಕೊಟ್ಟು ಅಂದು ಆ ನೂರಾರು ಮಕ್ಕಳನ್ನು ಅವರಿಗೆ ಒಪ್ಪಿಸಿ 'ಈ ಮಕ್ಕಳು ಯೋಗ್ಯರಾಗಬೇಕು ಎಂಬ ಇಷ್ಟ ನಿಮಗಿರುವುದಾದರೆ ಎಲೈ ದ್ರೋಣನೇ ನೀನು ಇವರಿಗೆ ಶಸ್ತ್ರವಿದ್ಯೆಯ ಉಪಾಧ್ಯಾಯನಾಗು' ವ! ಎನ್ನಲು ದ್ರೋಣನು ಹಾಗೆಯೇ ಮಾಡುತ್ತೇನೆಂದು ಕೇಳಿ ಅವರೆಲ್ಲರ ಮುಖವನ್ನು ನೋಡಿ೫೪. 'ಇಲ್ಲಿ ಸೇರಿರುವ ಇಷ್ಟು ಜನರೂ ನಾನು ಕೇಳಿದ್ದನ್ನು ಕೊಡಬಲ್ಲಿರಾ ಹೇಳಿ ಎನ್ನಲು ಎಲ್ಲರೂ ಮೌನವಾಗಿದ್ದರು. ಗುಣಾರ್ಣವನು 'ನೀವು ಆಶೆಪಟ್ಟು ಬೇಡಿದುದನ್ನು ನಾನು ಕೊಡುತ್ತೇನೆ' ಎಂದನು. ವ|| ಹಾಗೆನ್ನಲಾಗಿ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೇರಿಸಿಕೊಂಡು ದ್ರೋಣನು