________________
ಉಪೋದ್ಘಾತ | ೯ ಅಳುತುಂ, ನಂದನರಾಜಿಯೋಳ್ ನಲಿಯುತುಂ, ತದ್ರಾಜಹಂಸಂ, ನಿರಾ
ಕುಳಮೀ ಮಾಟಗಳಿಂದೆ, ಪೊಬ್ರುಗಳೆದಂ, ಸಂಸಾರಸಾರೋದಯಂ | ಹೀಗಿರಲು ಒಂದು ದಿನ ರಾಜನು ಸಕಲವೈಭವದಿಂದ ಸಭಾಸ್ಥಾನದಲ್ಲಿದ್ದಾಗ ಆತನ ಮಂತ್ರಿಯಾದ ಸ್ವಯಂಬುದ್ದನೆಂಬುವನು ರಾಜನ ಅಭ್ಯುದಯಕಾಂಕ್ಷಿಯಾಗಿ ಅವನನ್ನು ಕುರಿತು
“ನಿನ್ನೀ ವಿದ್ಯಾಧರಲಕ್ಷ್ಮಿ ಪುಣ್ಯಜನಿತಂ ವಿದ್ಯಾಧರಾಧೀಶ್ವರಾ' ಭವವಾರಾಶಿನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಮಂ ಬಿವ ಮಯಾಗಿರೆ ಸಂದ ಧರ್ಮಮೆ ವಲಂ ಪೊತ್ತುಗುಂ, ಮುಕ್ತಿಪ ರ್ಯವಸಾನಂಬರಮಾನುಷಂಗಿಕಫಲಂ, ಭೂಪೇಂದ್ರ, ದೇವೇಂದ್ರ ರಾ ಜವಿಲಾಸಂ ಪೆಜತಲ್ಕು, ನಂಬು, ಖಚರಕ್ಷಾಪಾಲಚೂಡಾಮಣೀ || ಎಂದು ಧರ್ಮಪ್ರಭಾವವನ್ನು ತತ್ಸಲಸ್ವಭಾವವನ್ನು ತಿಳಿಸಲು ಅಲ್ಲಿಯೇ ಇದ್ದ ಮಹಾಮತಿ ಸಂಭಿನ್ನಮತಿ ಶತಮತಿಗಳೆಂಬ ಇತರ ಮಂತ್ರಿಗಳು ತಮ್ಮಲೋಕಾಯತಿಕ ಯೋಗಾಚಾರ ಮಾಧ್ಯಮಿಕಮತಕ್ಕನುಗುಣವಾಗಿ ಜೀವಾಭಾವವನ್ನೂ ಐಹಿಕ ಸುಖಪಾರಮ್ಯವನ್ನೂ ಬೋಧಿಸಲು ಸ್ವಯಂಬುದ್ದನು ಅನುಭೂತ ಶ್ರುತದೃಷ್ಟರೇಚರ ಕಥಾನೀಕಗಳಿಂದಲೂ ಯುಕ್ತಿಯಿಂದಲೂ ಜೀವಸಿದ್ದಿಯನ್ನು ನಿಶ್ಚಯಿಸಿ ಪರಪಕ್ಷದೂಷಣಪುರಸ್ಸರವಾಗಿ ಸ್ವಪಕ್ಷವನ್ನು ಸಾಧಿಸಲು ಮಹಾಬಳನು ಸ್ವಯಂಬುದ್ಧನೇ ತನಗೆ ವಿಶ್ವಾಸಭೂಮಿಯಾಗಲು ಆತನ ಮಾರ್ಗವನ್ನೇ ಅನುಸರಿಸಿ ಅನೇಕ ವರ್ಷಕಾಲ ರಾಜ್ಯಭಾರ ಮಾಡಿ ಕೊನೆಯಲ್ಲಿ ಘೋರ ತಪಶ್ಚರಣೆಯ ಮೂಲಕ ಪ್ರಾಯೋಪಗಮನವಿಧಿಯಿಂದ ಶರೀರಭಾರವನ್ನಿಳಿಸಿ ಅನಲ್ಪಸುಖನಿವಾಸವೆನಿಸಿ ದೀಶಾನುಕಲ್ಪದಲ್ಲಿ ಲಲಿತಾಂಗದೇವನಾಗಿ ಹುಟ್ಟಿದನು. ಅಲ್ಲಿದ್ದ ಅನೇಕ ಮನೋನಯನವಲ್ಲಭೆಯರಲ್ಲಿ
'ಅದು ಸುಖದೊಂದು ಪಿಂಡಂ, ಅದು ಪುಣ್ಯದ ಪುಂಜಂ, ಅದಂಗಜಂಗೆ ಬಾಯ್ ಮೊದಲದು ಚಿತ್ತಜಂಗೆ ಕುಲದೈವಂ, ಅಂಗಜಚಕ್ರವರ್ತಿಗೆ ತಿದ ಪೊಸವಟ್ಟಂ, ಅಂತದು ಮನೋಜನ ಕೈಪಿಡಿ'
ಎಂಬ ರೂಪಿನ ಗಾಡಿಯಿಂದ ಕೂಡಿದ ಸ್ವಯಂಪ್ರಭೆಯು ಅವನ ಮನಸ್ಸನ್ನು ಸೂರೆಗೊಂಡಳು.
ನಗುಮರಾಂಗನಾಜನದ ರೂಪುಗಳೆಲ್ಲಮದೀಕೆಯದೊಂದು ದೇ ಸೆಗೆ ನಿಮಿರ್ವೊಂದು ಪುರ್ವಿನ ನಯಕ್ಕಮಮರ್ವೊಂದ ದಗುಂತಿಗೊಂದು ಭಂ ಗಿಗೆ ನೆಗಳೊಂದು ಮೆಚ್ಚಿನ ತೊದಳುಡಿಗಷ್ಟೊಡಮೆಯ್ವಾರವೇ ನೊಗಸುವವೆಂದು ತಳಗಲನಾಕೆಯನಾ ಲಲಿತಾಂಗವಲ್ಲಭಂ ||
ವ್ರತದಿಂದ ಪಡೆದ ಇಂದ್ರಲೋಕವೈಭವವು ಮನಕ್ಕಾಹ್ಲಾದವನ್ನುಂಟುಮಾಡುವ ಆ ಸತಿಯಿಂದ ಸಾರ್ಥಕವಾಯಿತೆಂದು ಲಲಿತಾಂಗದೇವನು ಸಂತೋಷಪಟ್ಟನು.