________________
೧೧೮ ) ಪಂಪಭಾರತಂ
ವರೆ ಇಂತಪ್ಪ ಮಗನಂ ನೀನಮೋಘಂ ಪಡವೆಯಂದು ಮುನಿಜನಂಗಳ್ ಪೇಟ್ಟ ಶುಭ ಸಪಘಲಂಗಳೊಡನೊಡನೆ ಗರ್ಭಚಿಹಂಗಳುಂ ತೂತಿ ಪಗವರ ಪೆಂಡಿರ ಮೊಗಂಗಳುಮಾಕಯ ಕುಚಚೂಚುಕಂಗಳುಮೊಡನೊಡನೆ ಕಂದಿದುವಾಕೆಯ ವಳಿತ್ರಯಂಗಳುಂ ಪಗೆವರ ಶತ್ರಯಂಗಳುಮೊಡನೊಡನೆ ಕಟ್ಟುವಾಕೆಯ ಬಾಸೆಗಳುಂ ಪಗೆವರ ಬಾಟ್ಟಾಸೆಗಳುಮೊಡನೊಡನಸಿಯವಾದುವಾಕೆಯ ಮಂದಗಮನಮುಂ ಪಗೆವರ ಮನಂಗಳುಮೊಡನೊಡನಲಸಿಕೆಯ ಕೈಕೊಂಡುವಾಕೆಯ ನಡುವಿನ ಬಡತನಮುಂ ಪಗೆವರ ಸಿರಿಯುಮೊಡನೊಡನೆ ಕಟ್ಟುವ ಸಮಯದೊಳ್ಉ || ಉಚಿಂದ ಬಾಳೊಳಾತ್ಮ ಮುಖಬಿಂಬಮನತ್ತಿಯ ನೋಡಲುಂ ಮನಂ |
ಪರ್ಚಿ ಧನುರ್ಲತಾ ಗುಣ ನಿನಾದಮನಾಲಿಸಿ ಕೇಳಲು ಮನಂ || ಬೆರ್ಚದ ಸಿಂಹ ಪೋತಕಮನೋವಲುಮಾಕಯ ದೋಹಳಂ ಕರಂ ಪರ್ಚದುದಾ ಗುಣಾರ್ಣವನ ಮುಂದಣ ಬೀರಮನಂದ ತೋರ್ಪಲ||
ವll ಮತ್ತಮೇಲಂ ಸಮುದ್ರಗಳ ನೀರನೊಂದುಮಾಡಿ ಮಾಯಲುಂ ವೇಳಾ ವನ ಲತಾಗೃಹೋದರ ಪುನಸ್ಥಳ ಪರಿಸರಪ್ರದೇಶದೊಳ್ ತೋಚಲಲುಮಟ್ಟಿಯಾಗ
ದಿಗ್ಗಜಗಳನ್ನೂ ಶೋಭಾಯಮಾನವಾಗಿ ಸ್ನಾನ ಮಾಡಿಸುವುದನ್ನು ಕಂಡುದರಿಂದ ಕಮಲದಂತೆ ಆಕರ್ಷಕವಾದ ಸೌಂದರ್ಯವುಳು ಮಗನನ್ನು ವ ನೀನು ಪಡೆಯುತ್ತೀಯೆ ಎಂದು ಮುನಿಜನಗಳು ಹೇಳಿದ ಶುಭಸ್ವಪ್ನಫಲಗಳ ಜೊತೆಯಲ್ಲಿಯೇ ಗರ್ಭಚಿಹ್ನೆಗಳೂ ತೋರಲಾಗಿ ಶತ್ರುರಾಜರಸ್ತ್ರೀಯರ ಮುಖವೂ ಆಕೆಯ ಮೊಲೆಯ ತೊಟ್ಟುಗಳೂ ಒಟ್ಟಿಗೆ ಕಂದಿದುವು (ಕಪ್ಪಾದವು). ಆಕೆಯ ಹೊಟ್ಟೆಯ ಮೂರು ಮಡಿಪುಗಳೂ ಶತ್ರುರಾಜರ ಪ್ರಭುಶಕ್ತಿ, ಮಂತ್ರಶಕ್ತಿ ಮತ್ತು ಉತ್ಸಾಹಶಕ್ತಿ ಎಂಬ ಶಕ್ತಿತ್ರಯಗಳ ಜೊತೆ ಜೊತೆಯಲ್ಲಿಯೇ ನಾಶವಾದುವು. ಆಕೆಯ ಬಾಸೆಗಳೂ (ಹೊಕ್ಕುಳಿನಿಂದ ಎದೆಯವರೆಗಿರುವ ಕೂದಲಿನ ಸಾಲು) ಶತ್ರುಗಳ ಬಾಳುವ ಆನೆಗಳೂ ಜೊತೆಜೊತೆಯಲ್ಲಿಯೇ ಕೃಶವಾದುವು. ಆಕೆಯ ಮಂದಗಮನವೂ ಶತ್ರುಗಳ ಮನಸ್ಪೂ ಜೊತೆ ಜೊತೆಯಲ್ಲಿಯೇ ಆಲಸ್ಯವನ್ನು ಹೊಂದಿದುವು. ಆಕೆಯ ನಡುವಿನ ಬಡತನವೂ (ಸಣ್ಣದಾಗಿರುವಿಕೆ-ಕೃಶತೆ) ಶತ್ರುಗಳ ಐಶ್ವರ್ಯವೂ ಜೊತೆಯಲ್ಲಿಯೇ " ಕೆಟ್ಟವು; ಆ ಸಮಯದಲ್ಲಿ ೧೪೨. ಮುಂದಿನ ಗುಣಾರ್ಣವನ' - (ಅರ್ಜುನನ-ಅರಿಕೇಸರಿಯ) ವೀರ್ಯವನ್ನು ಆ ದಿನವೇ ತೋರ್ಪಡಿಸುವಂತೆ ಕುಂತಿಯ ಬಸಿರ ಬಯಕೆಯು ಒರೆಗಳೆದ ಕತ್ತಿಯಲ್ಲಿ ತನ್ನ ಮುಖಮಂಡಲವನ್ನು ನೋಡಿಕೊಳ್ಳುವುದಕ್ಕೂ ಉತ್ಸಾಹದಿಂದ ಬಿಲ್ಲಿನ ಟಂಕಾರಶಬ್ದವನ್ನು ಮನವಿಟ್ಟು ಕೇಳುವುದಕ್ಕೂ ಸ್ವಲ್ಪವೂ ಹೆದರದೆ ಸಿಂಹದ ಮರಿಯನ್ನು ಸಲಹುವುದಕ್ಕೂ ಆಶೆಪಟ್ಟು ವಿಶೇಷವಾಗಿ ಹೆಚ್ಚಿತು ವll ಮತ್ತು ಸಮುದ್ರಗಳ ನೀರನ್ನು ಒಟ್ಟಿಗೆ ಸೇರಿಸಿ ಸ್ನಾನಮಾಡಲೂ ಸಮುದ್ರದ ಅಂಚಿನಲ್ಲಿರುವ ಕಾಡಿನಲ್ಲಿಯೂ ಬಳ್ಳಿವನೆಗಳ ಒಳಭಾಗದಲ್ಲಿಯೂ ಮರಳುದಿಣ್ಣೆಗಳ ಸುತ್ತಲೂ ಎಡೆಯಾಡಲೂ ಆಶೆಯಾಯಿತು.