________________
ಪ್ರಥಮಾಶ್ವಾಸಂ / ೧೧೧ ಪುಟ್ಟುವುದುಂ ಧರ್ಮಮುಮೊಡ ವುಟ್ಟಿದುದೀತನೂಳೆ ಧರ್ಮನಂಶದೊಳೀತಂ | ಪುಟ್ಟದನೆಂದಾ ಶಿಶುಗೊಸೆ |
ದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಹೆಸರುಂ | ವ|| ಅಂತು ಪಸರನಿಟ್ಟು, ಪರಕೆಯಂ ಕೊಟ್ಟುಕಂ 1 ಸಂತಸದಿನಿರ್ದು ಮಕ್ಕಳ
ಸಂತತಿಗೀ ದೂರೆಯರಿನ್ನುವಾಗದೊಡೆಂತು | ಸಂತಸಮನಗಿಲ್ಲಂದಾ ಕಾಂತೆ ಸುತಭ್ರಾಂತ ಮುನ್ನಿನಂತೆವೊಲಿರ್ದಳ್ ಮಂತ್ರಾಕ್ಟರ ನಿಯಮದಿನ) ಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದೇಂ || ಮಂತ್ರ ಪೇಟನೆ ಕುಡು ರಿಪು
ತಂತಕ್ಷಯಕರನನೆನಗೆ ಹಿತನಂ ಸುತನಂ || ವ|| ಎಂಬುದುಮದೇವಿರಿದಿತ್ತೆನೆಂದು ವಿಯತ್ತಳಕೊಗದೊಡಾತನಂಶಮಾಕೆಯ ಗರ್ಭ ಸರೋವರದೊಳಗೆ ಚಂದ್ರಬಿಂಬದಂತ ಸೊಗಯಿಸಚoll , ತ್ರಿವಳಿಗಳುಂ ವಿರೋಧಿ ನೃಪರುತ್ಸವಮುಂ ಕಿಡವಂದುವಾನನೇಂ
ದುವ ಕಡುವಳು ಕೂಸಿನ ನೆಗಟಿಯ ಬೆಳ್ಳುವೊಲಾಯ್ತು ಮುನ್ನ ಬ | ಳ್ಳುವ ನಡು ತೋರ್ಪ ಮಯ್ಯನೊಳಕೊಂಡುದು ಪೊಂಗೊಡನಂ ತಮಾಳ ಪ ಇವಳೆ ಮುಚ್ಚದಂದದೋ ಚೂಚುಕಮಾಂತುದು ಕರ್ಪನಾಕೆಯಾ || ೧೨೫
೧೨೨. ಇವನು ಹುಟ್ಟಲಾಗಿ ಇವನೊಡನೆಯೇ ಧರ್ಮವೂ ಹುಟ್ಟಿತು. ಯಮಧರ್ಮನ', ಅಂಶದಿಂದ ಈತ ಹುಟ್ಟಿದ್ದಾನೆ ಎಂದು ಆ ಋಷಿಸಮೂಹವು ಆ ಮಗುವಿಗೆ ಪ್ರೀತಿಯಿಂದ ಧರ್ಮಸುತನೆಂಬ ಹೆಸರನ್ನಿಟ್ಟಿತು. ವ|| ಹಾಗೆ ಹೆಸರಿಟ್ಟು ಹರಕೆಯನ್ನು ಕೊಟ್ಟರು ೧೨೩. ಸಂತೋಷದಿಂದಿದ್ದು ಮಕ್ಕಳ ಸಂತತಿಗೆ ಇವನಿಗೆ ಸಮಾನರಾದ ಇನ್ನೂ ಇತರರೂ ಆಗದಿದ್ದರೆ ಹೇಗೂ ನನಗೆ ಸಂತೋಷವಿಲ್ಲ ಎಂದು ಮಕ್ಕಳ ' . ಭ್ರಮೆಯಿಂದ ಕೂಡಿದ ಆ ಕುಂತಿಯು ಮೊದಲಿನ ಹಾಗೆಯೇ ಇದ್ದಳು. ೧೨೪.: ಅಲ್ಲದೆ, ಮಂತ್ರಾಕ್ಷರವನ್ನು ಜಪಿಸುವ ವಿಧಿಯಿಂದ ವಾಯುದೇವನನ್ನು ಆಹ್ವಾನಿಸಿ ಬರಿಸಲಾಗಿ ಅವನು 'ಇಷ್ಟಾರ್ಥವೇನು ಹೇಳು' ಎನ್ನಲು 'ವೈರಿಸೈನ್ಯವನ್ನು ನಾಶಪಡಿಸುವವನು ಎನ್ನಿಸಿಕೊಳ್ಳುವ ಹಿತನಾದ ಮಗನನ್ನು ಕೊಡು' ಎಂದಳು., ವ ವಾಯುದೇವನು 'ಇದೇನು ಮಹಾ ದೊಡ್ಡದು. ಕೊಟ್ಟಿದ್ದೇನೆ' ಎಂದು ಹೇಳಿ ಆಕಾಶಪ್ರದೇಶಕ್ಕೆ ನೆಗೆಯಲು, ಆತನಂಶವು ಅವಳ ಗರ್ಭಸರೋವರದಲ್ಲಿ ಚಂದ್ರಬಿಂಬದಂತೆ ಸೊಗಯಿಸಿತು. ೧೨೫. ಅವಳ ಹೊಟ್ಟೆಯ ಮೇಲಿನ ಮೂರು ಮಡಿಪು (ರೇಖೆಗಳೂ ವೈರಿರಾಜರ ಸಂತೋಷವೂ (ಒಟ್ಟಿಗೆ) ನಾಶವಾದುವು. ಅವಳ ಮುಖದಲ್ಲಿರುವ ಹೆಚ್ಚಾದ ಬಿಳುಪುಬಣ್ಣವು ಗರ್ಭದಲ್ಲಿರುವ ಮಗುವಿನ ಯಶಸ್ಸಿನ