________________
೧೦೮ | ಪಂಪಭಾರತಂ ಮುನಿಗಣೇಶ್ವರರೊಡನೆ ದಾಳಿವೂಗೊಮ್ಮೊಡನೆವರ್ಪ ಗೋಳಾಂಗೂಳಂಗಳುಮಂ ನೋಡಿ ತಪೋವನದ ತಪೋಧನರದ ತಪಃಪ್ರಭಾವಕ್ಕೆ ಚೋದ್ಯಂಬಟ್ಟುಚಂ| ವಿನಯದಿನಿ ಬನ್ನಿಮಿರಿಮೆಂಬವೊಲಿಂಚರದಿಂದಮೊಯ್ಯನೆ
ಯ್ಯನೆ ಮಣಿದುಂಬಿಗಳ ಮೊರೆವುವಲ್ಲೇಪಂತ ತಳ ಪೂ | ವಿನ ಪೊಸ ಗೊಂಚಲಿಂ ಮರವಿದೇನೆಸೆದಿರ್ದುವೂ ಕಲುವಾಗದೇ
ವಿನಯಮನೀ ತಪೋಧನರ ಕೈಯೊಳೆ ಶಾಖಿಗಳುಂ ನಗೇಂದ್ರದಾ || ೧೧೬
ವ|| ಎಂದು ಮೆಚ್ಚುತುಮೆನಗೆ ನೆಲಸಿರಲೀ ತಪೋವನಮ ಪಾವನವೆಂದು ತಪೋವನದ ಮುನಿಜನದ ಪರಮಾನುರಾಗಮಂ ಪೆರ್ಚಿಸಿ ಕಾಮಾನುರಾಗಮಂ ಬೆರ್ಚಿಸಿ ತದಾಶ್ರಮದೊಳಾಶ್ರಮಕ್ಕೆ ಗುರುವಾಗೆ ಪಾಂಡುರಾಜನಿರ್ಪನ್ನೆಗಮಿತ್ತ ಧೃತರಾಷ್ಟ್ರನ ಮಹಾದೇವಿಯಪ್ಪ ಗಾಂಧಾರಿ ನೂರ್ವಮ್ರಳಂ ಪಡೆವಂತು ಪರಾಶರಮುನೀಂದ್ರನೋಳ್ ಬರಂಬಡೆದಳೆಂಬುದಂ ಕುಂತಿ ಕೇಳು ತಾನುಂ ಪುತ್ರಾರ್ಥಿನಿಯಾಗಲ್ ಬಗೆದುಚಂ || ಎಸಸನದೊಳ್ ವಿರೋಧಿನೃಪರಂ ತಳೆದೊಟ್ಟಿಲುಮರ್ಥಿಗರ್ಥಮಂ
ಕಸವಿನ ಲೆಕ್ಕಮೆಂದು ಕುಡಲುಂ ವಿಪುಳಾಯತಿಯಂ ದಿಗಂತದೋಳ್ | ಪಸರಿಸಲುಂ ಕರಂ ನೆವ ಮಕ್ಕಳನೀಯದೆ ನೋಡೆ ನಾಡೆ ನೋ ಯಸಿದಪುದಿಕ್ಕುಪುಷ್ಪದವೊಲೆನ್ನಯ ನಿಷ್ಕಲ ಪುಷ್ಪದರ್ಶನಂ || ೧೧೭ *
ರಾಜಹಂಸಗಳನ್ನೂ ಮುನೀಂದ್ರ ಸಮೂಹದೊಡನೆ ದಾಳಿಯ ಹೂವನ್ನು ಕುಯ್ಯುವ ಮತ್ತು ಜೊತೆಯಲ್ಲಿ ಬರುವ ಕಪಿಗಳನ್ನೂ ನೋಡಿ ಆ ತಪೋವನದ ತಪಸ್ಸನ್ನೇ ಧನವನ್ನಾಗಿ ಉಳ್ಳ ಆ ಋಷಿಶ್ರೇಷ್ಠರ ತಪ್ಪಿಸಿನ ಪ್ರಭಾವಕ್ಕೆ ಆಶ್ಚರ್ಯಪಟ್ಟನು. ೧೧೬. ಇದೇನು! ಇಲ್ಲಿಯ ದುಂಬಿಯ ಮರಿಗಳು ವಿನಯದಿಂದ ಈ ಕಡೆ ಬನ್ನಿ, ಇಲ್ಲಿರಿ ಎನ್ನುವ ಹಾಗೆ ಮನೋಹರವಾದ ಧ್ವನಿಯಿಂದ ನಿಧಾನವಾಗಿ ಶಬ್ದಮಾಡುತ್ತಿವೆ. ಮರಗಳೂ ತಾವು ಹೊತ್ತಿರುವ ಹೊಸಹೂವಿನ ಗೊಂಚಲಿನ ಭಾರದಿಂದ ಪ್ರೀತಿಯಿಂದ ಒಲಿದು ಬಾಗಿದಂತೆ ಏನು ಸೊಗಸಾಗಿದೆ! ಈ ಪರ್ವತಶ್ರೇಷ್ಠದ ಮರಗಳೂ ಈ ತಪೋಧನರ ಕೈಯಿಂದಲೇ ನಮ್ರತೆಯನ್ನು ಕಲಿತವಾಗಿರಬೇಕಲ್ಲವೇ? ವlು ಎಂದು ಮೆಚ್ಚುತ್ತ ನಾನು ವಾಸವಾಗಿರಲು ಈ ತಪೋವನವೇ ಪವಿತ್ರವಾದುದು ಎಂದು ಆ ತಪೋವನದ ಮುನಿಜನರ ವಿಶೇಷಪ್ರೀತಿಯನ್ನು ಹೆಚ್ಚಿಸಿ ಕಾಮದಲ್ಲಿ ತನಗಿದ್ದ ಪ್ರೀತಿಯನ್ನು ಹೆದರಿ ಓಡಿಹೋಗುವ ಹಾಗೆ ಮಾಡಿ ಆ ಆಶ್ರಮದಲ್ಲಿ ಪಾಂಡುರಾಜನು ಆಶ್ರಮದ ಗುರುವಾಗಿ ಇದ್ದನು. ಈ ಕಡೆ ಧೃತರಾಷ್ಟ್ರನ ಮಹಾರಾಣಿಯಾದ ಗಾಂಧಾರಿಯು ನೂರುಮಕ್ಕಳನ್ನು ಪಡೆಯುವಂತೆ ವ್ಯಾಸಮಹರ್ಷಿಗಳಿಂದ ವರವನ್ನು ಪಡೆದಳೆಂಬುದನ್ನು ಕುಂತಿ ಕೇಳಿ ತಾನೂ ಮಕ್ಕಳನ್ನು ಬಯಸುವವಳಾದಳು. ೧೧೭, ಯುದ್ದದಲ್ಲಿ ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವ ಸಾಮರ್ಥ್ಯವುಳ್ಳ, ಯಾಚಕರಿಗೆ ದ್ರವ್ಯವನ್ನು ಕಸಕ್ಕೆ ಸಮನಾಗಿ ಎಣಿಸಿ ದಾನಮಾಡುವ ತಮ್ಮ ಪರಾಕ್ರಮವನ್ನು ದಿಕ್ಕುಗಳ ಕೊನೆಯಲ್ಲಿಯೂ ಪ್ರಸಾರ ಮಾಡಲು ಸಮರ್ಥರಾದ ಮಕ್ಕಳುಗಳನ್ನು ಕೊಡದೆ ನೋಡು ನೋಡುತ್ತಿರುವ ಹಾಗೆಯೇ ನನ್ನ (ತಿಂಗಳ ಮುಟ್ಟು) ರಜಸ್ವಲೆತನವು ಕಬ್ಬಿನ