________________
೧೦೬ | ಪಂಪಭಾರತ - ಉll ಸನ್ನತದಿಂ ರತಕ್ಕೆಳಸಿ ನಲ್ಲಳೊಳೊತೊಡಗೂಡಿದೆನ್ನನಿಂ ' ತನ್ನಯಮಚ್ಚುದರ್ಕೆ ಪೆಜತಿಲ್ಲದು ದಂಡಮೊಣಲ್ಲು ನಲ್ಗಳೊಳ್ |
ನೀನ್ನಡನೋಡಿಯುಂ ಬಯಸಿ ಕೂಡಿಯುಮಾಗಡೆ ಸಾವೆಯಾಗಿ ಪೋ
ಗಿನ್ನೆನೆ ರದ್ರಶಾಪಪರಿತಾಪವಿಲಾಪದೂಳಾ ಮಹೀಶ್ವರಂ || * ವll ಎನ್ನ ಗೆದ್ದ ಕಾಮಾಕ್ರಾಂತಕ್ಕೆ ಕಾಮಕೃತಮೇಂ ಪಿರಿದು.: ಕಂth ಎತ್ತ ವನಮತ ಮಗಯಾ
ವೃತ್ತಕಮಿಾ ತಪಸಿಯತ್ತ ಮೃಗವೆಂದೆಂತಾ | : ನತ್ರಚನಾತ್ತಕರ್ಮಾ ಯತ್ತಂ ಪೆಜತದಲ್ಲಮಘಟತಘಟಿತಂ |
೧೧೩ ವ|| ಎಂದು ಚಿಂತಿಸುತ್ತುಂ ಪೊಬಕ್ಕೆ ಮಗುಟ್ಟುವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಜ್ಞೆ ತದ್ಧತ್ತಾಂತಮೆಲ್ಲಮಂ ಪೇಜ್ಜು ಸಮಸ್ತವಸ್ತುಗಳು ದೀನಾನಾಥಜನಂಗಳೆ ಸೂಜಗೊಟ್ಟು ನಿಜಪರಿವಾರಮಂ ಬರಿಸಿಉ|| ಸಾರಮನಂಗ ಜಂಗಮಲತಾ ಲಲಿತಾಂಗಿಯರಿಂದಮಿ ಸಂ.
ಸಾರಮಿದಂಬುದಿನ್ನೆನಗೆ ತಪ್ಪುದು ತನ್ನುನಿ ಶಾಪದಿಂದಮಿ | ನಾರುಮಿದರ್ಕೆ ವಹಿಸದಿರಿಂ ವನವಾಸದೊಳಿರ್ಪನೆಂದು ದು ರ್ವಾರ ಪರಾಕ್ರಮಂ ತಳರೆ ಬಾರಿಸಿವಾರಿಸಿ ಕುಂತಿ ಮಾದ್ರಿಯರ್ || ೧೧೪
೧೧೨. ಸಂಭೋಗಸುಖಕ್ಕಾಸೆಪಟ್ಟು ಪ್ರಿಯಳಲ್ಲಿ ಪ್ರೇಮದಿಂದ ಸೇರಿಕೊಂಡಿದ್ದ ನನ್ನನ್ನು ಹೀಗೆ ಅನ್ಯಾಯದಿಂದ ಹೊಡೆದುದಕ್ಕೆ ನಿನಗೆ ಬೇರೆ ಶಿಕ್ಷೆಯಿಲ್ಲ, ನೀನು ಇನ್ನು ಮೇಲೆ ನಿನ್ನ ಪ್ರಿಯಳಲ್ಲಿ ಪ್ರೀತಿಸಿ ನೋಡಿದಾಗ ಅಥವಾ ಆಸೆಪಟ್ಟು ಕೂಡಿದಾಗ ಸಾಯುತ್ತೀಯೆ ಹೋಗು ಎಂದು ಶಪಿಸಿದನು. ಆ ಭಯಂಕರವಾದ ಶಾಪದಿಂದುಂಟಾದ ದುಃಖದ ಅಳುವಿನಿಂದ ಆ ಪಾಂಡುರಾಜನು ವn ನಾನು ಮಾಡಿದ ಕಾಮಕ್ರೀಡಾವಿಘ್ನಕ್ಕೆ ತಡೆಯಿಲ್ಲದ ಈ ಶಾಪವು ಹಿರಿದೇನಲ್ಲ - ೧೧೩. ಈ ಕಾಡೆಲ್ಲಿಯದು; ಈ ಬೇಟೆಯ ಕಾರ್ಯವೆಲ್ಲಿಯದು, ಈ ತಪಸ್ವಿಯೆಲ್ಲಿಯವನು, ಮೃಗವೆಂದು ನಾನು ಇದನ್ನು ಹೇಗೆ ಹೊಡೆದೆ, ಅಸಂಬದ್ಧವಾದ ಇದೆಲ್ಲ ನನ್ನ ಪ್ರಾಚೀನ ಕರ್ಮಾಧೀನವಲ್ಲದೆ ಬೇರೆಯಲ್ಲ ವ|| ಎಂದು ಯೋಚಿಸುತ್ತ ಪಟ್ಟಣಕ್ಕೆ ಹಿಂದಿರುಗಿ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಆ ಸಮಾಚಾರವನ್ನೆಲ್ಲ ಹೇಳಿ ಸಮಸ್ತವಸ್ತುಗಳನ್ನೂ ದೀನರೂ ಅನಾಥರೂ ಆದ ಜನಗಳಿಗೆ ಉದಾರವಾಗಿ ದಾನಮಾಡಿ ತನ್ನ ಪರಿವಾರವನ್ನು ಬರಮಾಡಿ - ೧೪೪ಸಂಸಾರವು ಸಾರವತ್ತಾಗಿರುವುದು ಮನ್ಮಥನ ನಡೆದಾಡುವ ಬಳ್ಳಿಗಳಂತಿರುವ ಸುಂದರಾಂಗಿಯರಿಂದಲ್ಲವೇ? ಆ ಋಷಿಶಾಪದಿಂದ ಇನ್ನು ಅದು ನನಗೆ ಇಲ್ಲವಾಯಿತು. ವನವಾಸದಲ್ಲಿರುತ್ತೇನೆ. ಇದಕ್ಕೆ ಮತ್ತಾರೂ ಅಡ್ಡಿಮಾಡಬೇಡಿ ಎಂದು ಅಪ್ರತಿಮ ಪರಾಕ್ರಮಿಯಾದ ಆ ಪಾಂಡುರಾಜನು ಕಾಡಿಗೆ ಹೊರಟನು. ಕುಂತಿ ಮಾದ್ರಿಯರು ಅವನನ್ನು ತಡೆದು ತಡೆದು ವನ ಹಿಂದೆ ಹಿಂದೆಯೇ ಬಂದರು.