________________
ಇತ್ಯಾದಿಗಳ ಮೂಲಕ ಸಾಮಾನ್ಯವಾಗಿ ಅಭಿವ್ಯಕ್ತವಾಗುವುದು. ಪ್ರಾಕೃತ ಕಥೆಗಾರ ತನ್ನ ಪಾತ್ರಗಳಿಗೆ ನೇರವಾಗಿ ನೈತಿಕತೆಯನ್ನು ತೋರಿಸುವುದಿಲ್ಲ. ಚರಿತ್ರದ ವಿಕಾಸಕ್ಕಾಗಿ, ಅವನು ಯಾವುದಾದರು ಪ್ರೇಮ ಕಥೆ ಅಥವಾ ಅನ್ಯ ಯಾವುದಾದರು ಜಾನಪದ ಕಥೆಯ ಮೂಲಕ ಅವನ ಜೀವನದ ವಿಕೃತಿಗಳನ್ನು ಉಪಸ್ಥಿತ ಮಾಡುತ್ತಾನೆ. ದೀರ್ಘ ಸಂಘರ್ಷದ ನಂತರ ಪಾತ್ರವು ಯಾವುದಾದರೂ ಆಚಾರ್ಯ ಅಥವಾ ಕೇವಲಿಯನ್ನು ಸಂಧಿ ಸುತ್ತಾನೆ ಮತ್ತು ಅವರ ಸಂಪರ್ಕದಿಂದ ಅವನ ಜೀವನದಲ್ಲಿ ನೈತಿಕತೆ ಬರುತ್ತದೆ. ಇದೇ ಸ್ಥಳದ ಮೇಲೆ ಸಿದ್ಧಾಂತದ ಸ್ಥಾಪನೆಯು ಸಹ ಇತಿವೃತ್ತದ ಸಹಕಾರದಿಂದ ಆಗುತ್ತಿರುತ್ತದೆ. ಕಥಾನಕ ಮತ್ತು ಘಟನೆಗಳ ವಿಕಾಸ ಮನೋರಂಜಕ ಶೈಲಿಯಲ್ಲಿ ಆಗುತ್ತದೆ.
ಪ್ರೊ. ಹರ್ಟೆಲ್ ಅವರು ಪ್ರಾಕೃತ ಕಥೆಗಳ ವಿಶೇಷತೆಯಿಂದ ಅತ್ಯಂತ ಆಕರ್ಷಿತರಾಗಿದ್ದಾರೆ. ಅವರು ಹೀಗೆ ತಿಳಿಸಿದ್ದಾರೆ. - 'ಆ ಕಥೆ ಹೇಳುವ ಕಲೆಯ ವಿಶಿಷ್ಟತೆಯನ್ನು ಪ್ರಾಕೃತ ಕಥೆಗಳಲ್ಲಿ ಪಡೆಯುತ್ತೇನೆ. ಈ ಕಥೆಗಳು ಭಾರತದ ಭಿನ್ನ ಭಿನ್ನ ವರ್ಗದ ಜನರ ರೀತಿ-ರಿವಾಜನ್ನು ಪೂರ್ಣ ಸತ್ಯದೊಂದಿಗೆ ಅಭಿವ್ಯಕ್ತಿ ಮಾಡುತ್ತದೆ. ಈ ಕಥೆಗಳು ಜನಸಾಧಾರಣರ ಶಿಕ್ಷಣದ ಉಗಮ ಸ್ಥಾನವಾಗುದಷ್ಟೇ ಅಲ್ಲ, ಭಾರತೀಯ ಸಭ್ಯತೆಯ ಇತಿಹಾಸವೂ ಆಗಿದೆ.'!
ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯ ಯಥಾರ್ಥ ಜ್ಞಾನ ಹೊಂದಲು ಪ್ರಾಕೃತ ಕಥಾ ಸಾಹಿತ್ಯ ಬಹಳ ಉಪಯೋಗಿ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಜನಸಾಧಾರಣರಿಂದ ತೆಗೆದುಕೊಂಡು ರಾಜ-ಮಹಾರಾಜರವರೆಗೆ ಚರಿತ್ರವನ್ನು ಎಷ್ಟೊಂದು ವಿಸ್ತಾರ ಹಾಗೂ ಸೂಕ್ಷ್ಮತೆಯೊಂದಿಗೆ ಚಿತ್ರಿತಗೊಂಡಿದೆಯೋ ಅಷ್ಟು ಅನ್ಯ ಭಾಷಾ ಕಥೆಗಾರರಿಂದ ಆಗಿಲ್ಲ. ನಿಮ್ಮ ಶ್ರೇಣಿಯ ವ್ಯಕ್ತಿಗಳ ಯಥಾರ್ಥ ಮೂಲ್ಯಾಂಕದ ಪ್ರಾಕೃತ ಕಥೆಗಳಲ್ಲಿ ಸಮ್ಮಿಳಿತವಾಗಿದೆ. ಈ ಕಥೆಗಳನ್ನು ಕೇವಲ ಧಾರ್ಮಿಕ ಕಥೆಗಳೆಂದು ತಿಳಿಯಲಾಗದು. ಇವುಗಳಲ್ಲಿ ಕಥಾರಸ ಪ್ರಚುರತೆಯ ಕಾರಣ, ಇವುಗಳಲ್ಲಿ ಮನೋರಂಜನೆ, ಕುತೂಹಲ, ಪ್ರಭಾವಾನ್ವಿತಿ ಮತ್ತು ಪೂರ್ಣರೂಪದಿಂದ ಇರುವುದರಿಂದ ಇವುಗಳನ್ನು ಉತ್ತಮ ಶ್ರೇಣಿಯ ಕಥೆಗಳೆಂದು ಸ್ವೀಕರಿಸಬಹುದಾಗಿದೆ. ಜೀವನದ ವಿಸ್ತಾರದಲ್ಲಿ ಎಷ್ಟು ಸಮಸ್ಯೆಗಳು ಮತ್ತು ಪರಿಸ್ಥಿತಿಗಳು ಬರುತ್ತವೆಯೋ, ಅವುಗಳಿಂದ ನಾನಾ ಪ್ರಕಾರದ ಸತ್ಯ ಮತ್ತು ಸಿದ್ಧಾಂತಗಳು ಹೊರಹೊಮ್ಮುವವೋ ಅವುಗಳೆಲ್ಲವೂ ಕಥೆಗಳಲ್ಲಿ ಯಥೇಷ್ಟವಾಗಿ ಸಮಾವೇಶವಾಗಿವೆ.
ಈ ಕಥೆಗಳಲ್ಲಿ ಪಾತ್ರಗಳ ಕ್ರಿಯಾಶೀಲತೆ ಮತ್ತು ವಾತಾವರಣದ ಸಜ್ಜುಗೊಳ್ಳುವಿಕೆಯ ನಾನಾ ಪ್ರಕಾರದ ಆವಶ್ಯಕತೆಗಳನ್ನು ಸೃಷ್ಟಿಸುತ್ತದೆ. ಈ ಕಥೆಗಳಲ್ಲಿ ಐಹಿಕ ಸಮಸ್ಯೆಗಳ ಚಿಂತನೆ, ಪಾರಲೌಕಿಕ ಸಮಸ್ಯೆಗಳ ಸಮಾಧಾನ, ಧಾರ್ಮಿಕ-ಸಾಮಾಜಿಕ ಪರಿಸ್ಥಿತಿಗಳ ವಿವರಣೆ, ಅರ್ಥನೀತಿ, ರಾಜನೀತಿಯ ನಿರ್ದೆಶನ ಹಾಗೂ ಜನತೆಯ ವ್ಯಾಪಾರಿಕ ಕುಶಲತೆಯ ಉದಾಹರಣೆ ಒಟ್ಟುಗೂಡಿವೆ. ಪಶುಪಕ್ಷಿಗಳ ಕಥೆಗಳ ವಿಕಾಸವೂ ಸಹ ಪ್ರಾಕೃತ ಕಥೆಗಳಿಂದ ಆಗಿದೆ. ಸಂಸ್ಕೃತದಲ್ಲಿ ಗುಪ್ತಸಾಮ್ರಾಜ್ಯದ ಪುನರ್ ಜಾಗರಣದ ನಂತರ ನೀತಿ ಅಥವಾ ಉಪದೇಶ ನೀಡಲು ಪಶು-ಪಕ್ಷಿಗಳ ಕಥೆಗಳನ್ನು ಬರೆಯಲಾಯಿತು. ಆದರೆ 'ನಾಯಾಧಮ್ಮ ಕಾಹಾಓ'ದಲ್ಲಿ
Jain Education International
292
For Private & Personal Use Only
www.jainelibrary.org