________________
ಸಾಹತ್ಯದಲ್ಲಿ ಚಂಪೂವಿಧಾದ (ಪ್ರಕಾರದ) ವಿಕಾಸ ಶಾಸನ ಬರಹ ಮತ್ತುಪ್ರಶಸ್ತಿಗಳ ಅಪೇಕ್ಷೆಯಿಂದ, ಗದ್ಯ-ಪದ್ಯ ಮಿಶ್ರಿತ ಪ್ರಾಕೃತ ಕಥೆಗಳಿಂದ ಬಂದಿದೆ ಎಂದು ತಿಳಿಯುವುದು ಹೆಚ್ಚು ತರ್ಕಸಂಗತವಾಗಿದೆ. ಪ್ರಾಕೃತದಲ್ಲಿ ಕಥೆಗಳನ್ನು ರೋಚಕಗೊಳಿಸುವುದಕ್ಕಾಗಿ ಗದ್ಯ-ಪದ್ಯ ಎರಡನ್ನೂ ಪ್ರಯೋಗಿಸಲಾಗಿದೆ. ಪದ್ಯ ಭಾವನೆಯ ಪ್ರತೀಕವಾಗಿದೆ ಮತ್ತು ಗದ್ಯ ವಿಚಾರದ ಪ್ರತೀಕವಾಗಿದೆ. ಮೊದಲನೆಯದರ ಸಂಬಂಧ ಹೃದಯದೊಂದಿಗೆ, ಎರಡನೆಯದರ ಸಂಬಂಧ ಮಸ್ತಿಷ್ಕದೊಂದಿಗೆ. ಆದ್ದರಿಂದ ಪ್ರಾಕೃತ ಕಥೆಗಾರರು ತಮ್ಮ ಕಥನದ ಪುಷ್ಟಿ , ಕಥಾನಕದ ವಿಕಾಸ, ಧರ್ಮೋಪದೇಶ, ಸಿದ್ದಾಂತ ನಿರೂಪಣ ಹಾಗೂ ಕಥೆಗಳಲ್ಲಿ ಪ್ರಭಾವೋತ್ಪಾದಕತೆಯನ್ನು ತರಲು ಗದ್ಯದಲ್ಲಿ ಪದ್ಯದ ಚುಂಬನದ ಗುರುತು ಮತ್ತು ಪದ್ಯದಲ್ಲಿ ಗದ್ಯದ ಚುಂಬನದ ಗುರುತು ತಂದಿದ್ದಾರೆ. ಸಮರಾಇಚ್ಚಕಹಾ ಮತ್ತು ಕುವಲಯಮಾಲಾದ ಗದ್ಯ-ಪದ್ಯಮಯಿ ವಿಶೇಷತೆ ಚಂಪೂ ಪ್ರಕಾರದ ಉತ್ಪತ್ತಿಗೆ ಕಾರಣವಾಗಿರಬಹುದು. ಸಂಸ್ಕೃತದಲ್ಲಿ ತ್ರಿವಿಕ್ರಮ ಭಟ್ಟನ ಮದಾಲಸಾಚಂಪೂ ಮತ್ತು ನಳಚಂಪೂಗಿಂತ ಮೊದಲೇ ಯಾವುದೇ ಚಂಪೂಗ್ರಂಥ ಉಪಲಬ್ದವಾಗುವುದಿಲ್ಲ - ದಂಡಿಯು ಚಂಪುವಿನ ಪರಿಭಾಷೆ ನೀಡಿದ್ದಾನೆ, ಆದರೆ ಪ್ರಾಕೃತದಲ್ಲಿ ದಂಡಿಗೂ ಮೊದಲೇ ಗದ್ಯ-ಪದ್ಯ ಮಿಶ್ರಿತ ಶೈಲಿಯಲ್ಲಿ ಬರೆದ ಕಥೆಗಳಿದ್ದವು. ಆದ್ದರಿಂದ ನಮ್ಮ ದೃಷ್ಟಿಯಲ್ಲಿ ಸಂಸ್ಕೃತದಲ್ಲಿ ಚಂಪೂಪ್ರಕಾರದ ಮೂಲಸೋತ (ಮೂಲನೆಲೆ) ಪ್ರಾಕೃತ ಕಥೆಗಳೇ ಆಗಿವೆ.
ಪ್ರಾಕೃತ ಕಥೆಗಳು ಜಾನಪದ ಕಥೆಯ ಆದಿಮರೂಪಗಳಾಗಿವೆ. ವಸುದೇವ ಹಿಂಡಿಯಲ್ಲಿ ಜಾನಪದ ಕಥೆಗಳ ಮೂಲಸ್ರೋತ ಸುರಕ್ಷಿತವಾಗಿದೆ. ಗುಣಾಡ್ಯನ ಬೃಹತ್ಕಥೆಯು ಪೈಶಾಚಿ ಪ್ರಾಕೃತದಲ್ಲಿ ಬರೆಯಲಾದ ಜಾನಪದ ಕಥೆಗಳ ವಿಶ್ವಕೋಶವಾಗಿದೆ. ಆದ್ದರಿಂದ ಪ್ರಾಕೃತ ಕಥೆಗಳಿಗೆ ಜಾನಪದ ಕಥೆಗಳೊಂದಿಗೆ ಘನಿಷ್ಠವಾದ ಸಂಬಂಧವಿದೆ. ಜಾತೀಯ ಗೌರವ, ವೀರಪೂಜೆ, ಜೀವನದ ನವೀನ ವ್ಯಾಖ್ಯಾ ಹಾಗೂ ಸಂಕೇತವಿಶೇಷದ ಉಪಲಬ್ಬಿ ಪ್ರಾಕೃತ ಕಥೆಗಳಲ್ಲಿ ಪಡೆಯಬಹುದಾಗಿದೆ. ವಿಶಿಷ್ಟ ತಥ್ಯ, ಸಾಮಾಜಿಕ ಮತ್ತು ರಾಜನೈತಿಕ ವಾತಾವರಣದ ಯಥಾತಥ್ಯ ಚಿತ್ರಣ ಹಾಗೂ ಗಹನ ಸಮಸ್ಯೆಗಳಿಗೆ ಸಮಾಧಾನ ಪ್ರಾಕೃತ ಕಥೆಗಳಲ್ಲಿ ಹುದುಗಿದೆ. ಕಥೆಗಳ ಚೌಕಟ್ಟು ಜಾನಪದ ಕಥೆಯದಾಗಿದೆ, ಪ್ರಾಕೃತ ಲೇಖಕರು ಇದೇ ಧರಾತಲದ ಮೇಲೆ ಧಾರ್ಮಿಕ ಕಥೆಗಳ ನಿರ್ಮಾಣ ಮಾಡಿದ್ದಾರೆ. ಸಾಧಾರಣವಾಗಿ ಪ್ರಾಕೃತ ಕಥೆಗಳ ಸ್ವರೂಪ ಪಾಲಿಕಥೆಗಳಂತೆ ಕಂಡು ಬರುತ್ತದೆ, ಆದರೆ ಅಂತರವಿದೆ. ಪಾಲಿ ಕಥಾ ಸಾಹಿತ್ಯದಲ್ಲಿ ಪೂರ್ವಜನ್ಮ ಕಥೆಯ ಮುಖ್ಯ ಭಾಗವಿರುತ್ತದೆ, ಆದರೆ ಪ್ರಾಕೃತ ಕಥೆಗಳಲ್ಲಿ ಅದು ಕೇವಲ ಉಪಸಂಹಾರದ ಕಾರ್ಯ ಮಾಡುತ್ತದೆ. ಪಾಲಿಕಥೆಗಳಲ್ಲಿ ಬೋಧಿ ಸತ್ವ ಅಥವಾ ಭವಿಷ್ಯ ಬುದ್ದನದೇ ಮುಖ್ಯಪಾತ್ರವಿರುತ್ತದೆ ಮತ್ತು ಕಥೆಯ ಅಂತ್ಯ ಪರಿಣಾಮ ಉಪದೇಶ ಕಥೆಯ ರೂಪದಲ್ಲಿ ಆಗುತ್ತದೆ. ಎಲ್ಲ ಜಾತಕ ಕಥೆಗಳು ಒಂದೇ 'ಪಿಟೀ-ಪಿಟಾಣ' ಶೈಲಿಯಲ್ಲಿ ಬರೆಯಲಾಗಿದೆ. ಆದರೆ ಪ್ರಾಕೃತ ಕಥೆಗಳು 'ಭೂತ' ವಲ್ಲ, ವರ್ತಮಾನವೂ ಆಗಿರುತ್ತದೆ. ಪ್ರಾಕೃತ ಕಥೆಗಾರನು ಜನ್ಮ-ಜನ್ಮಾಂತರಗಳ ಸಂಬಂಧವನ್ನು ವರ್ತಮಾನದೊಂದಿಗೆ ಜೋಡಿಸುತ್ತಾನೆ. ಸಿದ್ದಾಂತದ ಪ್ರತಿಷ್ಠೆಯನ್ನು ಸಹ ಸೀದಾ-ಸಾದಾ ರೂಪದಲ್ಲಿ ಮಾಡವುದಿಲ್ಲ, ಬದಲಾಗಿ ಪಾತ್ರಗಳ ಕಥೋಪಕಥನ ಮತ್ತು ಶೀಲನಿರೂಪಣ
- 291 -
Jain Education International
For Private & Personal Use Only
www.jainelibrary.org