________________
ಯಾವಾಗಲೂ ಸಂಸಾರದಲ್ಲಿನ ಲಾಭ-ನಷ್ಟದ ಬಗ್ಗೆ ತಿಳಿಸಿಕೊಡುತ್ತದೆ ಮತ್ತು ಪ್ರಜ್ಞೆ ಯಾವಾಗಲೂ ಮೋಕ್ಷದ ದಾರಿಯನ್ನೇ ತೋರಿಸುತ್ತದೆ. ಇಂದ್ರಿಯಗಳ ಮೇಲೆ ಮನಸ್ಸು, ಮನಸ್ಸಿನ ಮೇಲೆ ಬುದ್ಧಿ, ಬುದ್ಧಿಯ ಮೇಲೆ ಅಹಂಕಾರ ಹಾಗು ಇದೆಲ್ಲದರ ಮೇಲೆ ಆತ್ಮವಿರುವುದು. ಬುದ್ದಿಯು, ಮನಸ್ಸು ಅಥವಾ ಚಿತ್ತ ಇವೆರಡರಲ್ಲಿ ಒಂದನ್ನು ಆಲಿಸಿ ನಿರ್ಣಯ ತೆಗೆದುಕೊಳ್ಳುತ್ತದೆ ಮತ್ತು ಅಹಂಕಾರವು ಅಂಧನಂತೆ ಬುದ್ದಿಯ ಹೇಳಿಕೆಯ ಅನುಸಾರವಾಗಿ ಅದರ ಮೇಲೆ ತನ್ನ ಹಸ್ತಾಕ್ಷರವನ್ನು ಹಾಕುತ್ತದೆ. ಅಹಂಕಾರದ ಹಸ್ತಾಕ್ಷರವಾಗುತ್ತಿದ್ದಂತೆ ಆ ಕಾರ್ಯವು ಬಾಹ್ಯದಲ್ಲಿ ಪ್ರಾರಂಭವಾಗುತ್ತದೆ. ಇದರಿಂದಾಗಿ ಅಹಂಕಾರವು ಕರ್ತಭೋಕ್ತನಾಗುತ್ತದೆ. ಅಹಂಕಾರವು ಸ್ವತಃ ಏನು ಮಾಡುವುದಿಲ್ಲ ಆದರೂ ನಾನು ಮಾಡಿದೆನೆಂದು ಅಂದುಕೊಳ್ಳುತ್ತದೆ. ಹಾಗೆ ಅಂದುಕೊಂಡ ಕ್ಷಣದಿಂದ ಕರ್ತನಾಗಿ ನಂತರ ಅದುವೇ ಭೋಕ್ತನಾಗಿ ಅನುಭವಿಸಬೇಕಾಗುತ್ತದೆ. ಸಂಯೋಗದಿಂದ ಕಾರ್ಯವಾಗುವುದು, ತನ್ನಿಂದಲ್ಲ ಎಂಬ ಜ್ಞಾನದ ಅರಿವಾದ ಕೂಡಲೇ ಅಕರ್ತನಾಗುತ್ತದೆ. ನಂತರ ಅದಕ್ಕೆ ಕರ್ಮದ charge ಆಗುವುದಿಲ್ಲ. ಅಂತಃಕರಣದ ಎಲ್ಲಾ ಕ್ರಿಯೆಯು ಯಾಂತ್ರಿಕವಾಗಿದೆ (mechanical), ಇದರಲ್ಲಿ ಆತ್ಮಕ್ಕೆ ಮಾಡಬೇಕಾದುದು ಏನೂ ಇಲ್ಲ. ಆತ್ಮವು ಕೇವಲ ಜ್ಞಾತಾ-ದೃಷ್ಟಾ ಹಾಗು ಪರಮಾನಂದವೇ ಆಗಿದೆ.
-ಡಾ. ನಿರುಬೇನ್ ಅಮೀನ್