SearchBrowseAboutContactDonate
Page Preview
Page 37
Loading...
Download File
Download File
Page Text
________________ 29 ಅಂತಃಕರಣದ ಸ್ವರೂಪ Mechanical ಆತ್ಮ ಚಂಚಲವಾಗಿದೆ. ಎಲ್ಲಾ ಜನರು Mechanical ಆತ್ಮದ ಹುಡುಕಾಟವನ್ನು ಮಾಡುತ್ತಾರೆ. ಅವರಿಗಿನ್ನೂ ಆ Mechanical ಆತ್ಮ ಎನ್ನುವುದೇ ಸರಿಯಾಗಿ ಲಭ್ಯವಾಗಿಲ್ಲ, ಹಾಗಿರುವಾಗ ಅಚಲದ ಬಗೆಗಿನ ಮಾತು ಎಲ್ಲಿಂದ ಲಭ್ಯವಾಗಲು ಸಾಧ್ಯ? ಅದು ಏನಿದ್ದರು 'ಜ್ಞಾನಿ ಪುರುಷರ ಕೆಲಸವಾಗಿದೆ. ಎಂದೋ ಅಲ್ಪ ಸಮಯದವರೆಗೆ ಮಾತ್ರ 'ಜ್ಞಾನಿ ಪುರುಷರ' ಉಪಸ್ಥಿತಿಯು ಲಭ್ಯವಿರುತ್ತದೆ. ಸಾವಿರಾರು ವರ್ಷಗಳಲ್ಲಿ ಎಲ್ಲೋ ಒಬ್ಬಿಬ್ಬರು 'ಜ್ಞಾನಿ ಪುರುಷರು' ಇರುತ್ತಾರೆ. ಆಗ ಅವರಿಂದ ಆತ್ಮವು ಅನಾವರಣಗೊಂಡಾಗ, ನಮ್ಮ ಅರಿವಿಗೆ ಬರುತ್ತದೆ. * ಪ್ರತಿಯೊಂದು ಪುಸ್ತಕದಲ್ಲಿ ಬರೆದಿದೆ, ಪ್ರತಿಯೊಂದು ಧರ್ಮದ ಗ್ರಂಥಗಳಲ್ಲಿ ಬರೆಯಲಾಗಿದೆ. ಅದೇನೆಂದರೆ, ಆತ್ಮಜ್ಞಾನವನ್ನು ಅರಿತುಕೊ, ಅದುವೇ ಅಂತಿಮ ವಿಚಾರವಾಗಿದೆ. ಹಿಂದುಸ್ತಾನದಲ್ಲಿ ಈಗಲೂ ಬಹಳಷ್ಟು ಸಂತರು, ಮಹಾತ್ಮರು ಇದ್ದಾರೆ. ಅವರೆಲ್ಲರೂ ಆತ್ಮದ ಅನ್ವೇಷಣೆಯನ್ನು ಮಾಡುತ್ತಲೇ ಇರುತ್ತಾರೆ. ಆದರೆ ಆತ್ಮ ಪ್ರಾಪ್ತಿಯಾಗಿರುವಂತಹ ಯಾವ ವ್ಯಕ್ತಿಯು ಇಲ್ಲ. (ಸಾಮಾನ್ಯವಾಗಿ) ಆತ್ಮ, ಸಿಗುವಂತಹ ವಸ್ತುವಲ್ಲ. ಯಾರು 'ಸಿಕ್ಕಿದೆ' ಎಂದು ಹೇಳುತ್ತಾರೋ, ಅದು ಅವರು ಭ್ರಾಂತಿಯಿಂದ ಹೇಳುತ್ತಾರೆ. ಅವರಿಗೆ ತಿಳಿದೇಯಿಲ್ಲ ಆತ್ಮ ಎಂತಹ ವಸ್ತು ಎಂದು. ಆತ್ಮ ಸ್ವತಃ ಪರಮಾತ್ಮನೇ ಆಗಿದೆ. ಎಂದಾದರೂ ಅದು ಸಿಕ್ಕಿಬಿಟ್ಟರೆ, ಸ್ವತಃ ತಾನು ಪರಮಾತ್ಮನೇ ಆಗಿ ಬಿಡುತ್ತಾನೆ. ಎಲ್ಲಿಯವರೆಗೆ 'ಹೇ ಭಗವಂತ! ಇದು ಮಾಡಿಕೊಡು, ಅದು ಮಾಡಿಕೊಡು' ಎಂದು ಬೇಡುತಲಿರುತ್ತಾನೋ, ಅಲ್ಲಿಯವರೆಗೆ 'ನಾನೇ ಸ್ವಯಂ ಭಗವಂತ, ನಾನೇ ಸ್ವಯಂ ಪರಮಾತ್ಮ' ಎಂದು ಹೇಳುವ ಸಾಹಸವನ್ನು ಮಾಡಲಾಗುವುದಿಲ್ಲ.ಎಲ್ಲಿಯವರೆಗೆ 'ನಾನು-ನೀನು, ನಾನು-ನೀನು' ಇರುವುದೋ, ಅಲ್ಲಿಯವರೆಗೆ ಅವನು ಏನ್ನನ್ನೂ ಗಳಿಸಲು ಸಾಧ್ಯವಾಗುವುದಿಲ್ಲ. ಪ್ರಶ್ನಕರ್ತ: ಅದಕ್ಕಾಗಿ ಏನು ಮಾಡಬೇಕು? ದಾದಾಶ್ರೀ: ಏನು ಮಾಡಬೇಕಾಗಿಲ್ಲ; ಅಂತಹ ಯಾವ ವ್ಯಕ್ತಿಯೂ ಇಲ್ಲ, ಅದಕ್ಕಾಗಿ ಏನನ್ನಾದರು ಮಾಡಬಲ್ಲವರು. ಏಕೆಂದರೆ ನೀವು ಒಂದು ಆಟದ ಬುಗುರಿಯ ಹಾಗೆ (You are a Top) ನಿಮ್ಮಲ್ಲಿ ಯಾವ ಶಕ್ತಿಯೂ ಇಲ್ಲ. ನಿಮ್ಮನ್ನು ಪ್ರಕೃತಿ ಆಡಿಸುತ್ತದೆ. ನಿಮಗೆ 'ನೀವು ಯಾರು?' ಎಂಬುದು ತಿಳಿದಿಲ್ಲ. ನಿಮ್ಮ ಅಸ್ತಿತ್ವ ಎಂತಹದ್ದು? ನೀವು ಏನು ಮಾಡಬಲ್ಲಿರಿ? ಎಂಬ ಅರಿವು ನಿಮಗಿಲ್ಲ. ಯಾವುದನ್ನು ಪ್ರಕೃತಿಯೆಂದು ತಿಳಿಯಲಾಗಿದೆಯೋ, ಅಲ್ಲಿ ಪ್ರಕೃತಿಯ ಆಧಾರದಿಂದ ನಡೆಯುವುದಾಗಿದೆ ಹಾಗೂ ತನ್ನನ್ನು ಕೂಡಾ 'ತಾನು' ತಿಳಿಯಲಾಗಿದೆಯೋ, ಅಲ್ಲಿ ತನ್ನಯ
SR No.034302
Book TitleAntahskaran Ka Swroop Kannada
Original Sutra AuthorN/A
AuthorDada Bhagwan
PublisherDada Bhagwan Aradhana Trust
Publication Year
Total Pages54
LanguageKannada
ClassificationBook_Other
File Size3 MB
Copyright © Jain Education International. All rights reserved. | Privacy Policy