________________
ಎಂದು ಆದಿತೀರ್ಥಂಕರರಿಂದ ಮೊದಲ್ಗೊಂಡು ಎಲ್ಲ ಇಪ್ಪತ್ತುನಾಲ್ಕು ತೀರ್ಥಂಕರರನ್ನು ಸ್ತುತಿಸುತ್ತಾನೆ. ಭಗವಾನ್ ವೃಷಭದೇವರ ಮುಖಕಮಲದಿಂದ ಪ್ರಕಟವಾದ ಪಾವನವಚನಗಳನ್ನು ಗ್ರಂಥಸ್ಥಮಾಡಿರುವ ಎಂಬತ್ತುನಾಲ್ಕು ಗಣಧರರನ್ನು ನೆನೆಯುತ್ತಾನೆ. ಈ ಎಲ್ಲವನ್ನು ಕಂದಪದ್ಯಗಳ ರೂಪದಲ್ಲಿ ನಿರೂಪಿಸಿರುವುದು ಹಾಗೂ ಗ್ರಂಥದಲ್ಲಿ ಅಲ್ಲಲ್ಲಿಯೇ ಕಂದ ಮತ್ತು ವೃತ್ತಗಳ ರಚನೆ ಮಾಡಿರುವುದು ಕೇಶವಣ್ಣನ ಕವಿತಾಶಕ್ತಿಯನ್ನು ತೋರ್ಪಡಿಸುತ್ತದೆ.
ಆನಂತರದಲ್ಲಿ " ಶ್ರೀಮದ್ರಾಚಮಲ್ಲದೇವ ಮಹೀವಲ್ಲಭ ಮಹಾಮಾತ್ಯ ಪದವಿರಾಜಮಾನ ರಣರಂಗಮಲ್ಲಾಸಹಾಯ ಪರಾಕ್ರಮಗುಣರತ್ನಭೂಷಣ' ಮೊದಲಾದ ವಿಶೇಷಣಗಳಿಂದ ಚಾವುಂಡರಾಯನನ್ನು ನೆನೆದು 'ಶ್ರೀಮನ್ನೇಮಿಚಂದ್ರಸೈದ್ದಾಂತಚಕ್ರವರ್ತಿ'ಗಳನ್ನು ಸ್ತುತಿಸಿದ್ದಾನೆ. ಗ್ರಂಥದಾದಿಯಲ್ಲಿ ಮಂಗಲಾಚರಣೆಯಿಂದಾಗುವ ಪ್ರಯೋಜನವನ್ನು ತಿಳಿಸಿದ ಕೇಶವಣ್ಣನು ಗೊಮ್ಮಟಸಾರ ಗ್ರಂಥದಿಂದಾಗುವ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಯೋಜನಗಳನ್ನು ಹೇಳುತ್ತಾನೆ. ಅನಂತರ ರಾಜಾಧಿಪತ್ಯದಲ್ಲಿರುವ ಹದಿನೆಂಟು ಶ್ರೇಣಿಗಳ ವಿವರಗಳನ್ನು ನೀಡಲಾಗಿದೆ. ಮುಂದೆ "ಮಹಾಕಷಾಯ ಕರ್ಮ ಪ್ರಕೃತಿ ಪ್ರಾಗೃತ ಪ್ರಥಮ ಸಿದ್ದಾಂತ ಜೀವಸ್ಥಾನ, ಕ್ಷುದ್ರಕಬಂಧ, ಬಂಧಸ್ವಾಮಿತ್ವ ವೇದನಾಖಂಡ, ವರ್ಗಣಾಖಂಡ, ಮಹಾಬಂಧಗಳೆಂಬ" ಷಟ್ಟಂಡಗಳನ್ನೊಳಗೊಂಡ ಗೊಮ್ಮಟಸಾರ ಪಂಚಸಂಗ್ರಹದ ವಿಸ್ಕತ ವಿವರಣೆಯನ್ನು ನೀಡುವ ಸೂಚನೆ ನೀಡುತ್ತಾನೆ.
ಮುಂದುವರಿದ ಕೇಶವಣ್ಣನು "ಚತುರ್ದಶ ಗುಣಸ್ಥಾನಂಗಳುಂ, ಅಷ್ಟಾನವತಿ (೯೮) ಜೀವಸಮಾಸಗಳುಂ, ಷಟ್ಪರ್ಯಾಪ್ತಿಗಳುಂ, ದಶಪ್ರಾಣಂಗಳುಂ, ಚತುಃಸಂಜ್ಞೆಗಳುಂ, ನಾಲ್ಕು ಗತಿಮಾರ್ಗಣೆಗಳು, ಐದು ಇಂದ್ರಿಯಮಾರ್ಗಣೆಗಳುಂ, ಷಟ್ ಕಾಯಮಾರ್ಗಣೆಗಳುಂ, ಪದಿನೈದು ಯೋಗಮಾರ್ಗಣೆಗಳು, ಮೂಟು ವೇದಮಾರ್ಗಣೆಗಳುಂ, ನಾಲ್ಕು ಕಷಾಯಮಾರ್ಗಣೆಗಳುಂ, ಎಂಟು ಜ್ಞಾನಮಾರ್ಗಣೆಗಳುಂ, ಏಳು ಸಂಯಮಮಾರ್ಗಣೆಗಳುಂ, ನಾಲ್ಕು ದರ್ಶನಮಾರ್ಗಣೆಗಳುಂ, ಆಜು ಲೇಶ್ಯಾಮಾರ್ಗಣೆಗಳುಂ, ಎರಡು ಭವ್ಯಮಾರ್ಗಣೆಗಳುಂ, ಆಜು ಸಮ್ಯಕ್ಕೆ ಮಾರ್ಗಣೆಗಳು, ಎರಡು ಸಂಜ್ಞೆಮಾರ್ಗಣೆಗಳುಂ, ಎರಡಾಹಾರಮಾರ್ಗಣೆಗಳು, ಎರಡು ಉಪಯೋಗಂಗಳೆಂದಿಂತು ಜೀವಪರೂಪಣಂಗಳೊಳ್ ಇಪ್ಪತ್ತು ಪ್ರರೂಪಣೆಗಳನ್ನು ಹೇಳುತ್ತಾನೆ.
ಪ್ರತಿಯೊಂದು ಅಧಿಕಾರದಲ್ಲಿಯೂ ಮತ್ತೆ ಉಪವಿಭಾಗಗಳಿವೆ. ಗುಣಸ್ಥಾನವೊಂದರಲ್ಲಿಯೇ ಮಿಥ್ಯಾದೃಷ್ಟಿ , ಸಾಸಾದನ ಸಮ್ಯಗ್ದೃಷ್ಟಿ, ಸಮ್ಯಗ್ಮಿಥ್ಯಾವೃಷ್ಟಿ, ಅಸಂಯತ ಸಮ್ಯಗ್ದೃಷ್ಟಿ ಮೊದಲಾದ ಹದಿನಾಲ್ಕು ಭಾಗಗಳಲ್ಲಿ ವಿಸ್ತಾರವಾದ ವಿಷಯನಿರೂಪಣೆಯಿದೆ. ಪ್ರಮತ್ತ ಗುಣಸ್ಥಾನದಲ್ಲಿ ಜೀವನಲ್ಲಿ ಒದಗಿಬರುವ ಪ್ರಮಾದಗಳನ್ನು ಅಂಕಿಸಂಖ್ಯೆಗಳ ಮೂಲಕ ವಿಸ್ತರಿಸಿ ಹೇಳುವ ರೀತಿ ಅನನ್ಯವಾದುದು. ಅಂತ್ಯದಲ್ಲಿ 'ಪ್ರಮಾದಸಂಖ್ಯಾ ವಿಶೇಷಮನಳಿಯಲ್ಪಡುಗುಂ. ಅದೆಂತೆನೆ ವಿಕಥೆಗಳು ೨೫, ಕಷಾಯಂಗಳು ೨೫, ಇಂದ್ರಿಯಂಗಳು ೬, ನಿದ್ರೆಗಳು ೫, ಸ್ನೇಹಮೋಹಂಗಳೆರಡು. ಇವೆಲ್ಲಮನಡರಿಗುಣಿಸಿದೊಡೆ ೩೭೫೦೦ ಪ್ರಮಾದಂಗಳಪ್ಪುವು" (ಪು.೪೩) ಎಂದು ಹೇಳುವ ರೀತಿ ವಿಶಿಷ್ಟತೆಯಿಂದ ಕೂಡಿದೆ.
- 302 -
Jain Education International
For Private & Personal Use Only
www.jainelibrary.org