________________
ಸಾದರಪಡಿಸಿದರು. ಕೇಶವಣ್ಣನು ಗ್ರಂಥಾಂತ್ಯದಲ್ಲಿ ಹೇಳಿರುವ
ಪೊಣರ್ದಿ ಧೂರ್ತಜನೋಪಸರ್ಗಮನಿಶಂ ಬೆಂಬತ್ತೆ ಬೆಂಬೀಳದಾ ನೊಣರ್ದೆ೦ ಗೊಮ್ಮಟಸಾರವೃತ್ತಿಯನಿದಂ ಕರ್ನಾಟವಾಕ್ಯಂಗಳಿಂ ಪ್ರಣತರ್ ಧೀಧನರುಂ ಬಹುಶ್ರುತರಿದಂ ನಿರ್ದಿ೦ ಬುಧರ್ ಧರ್ಮಭೂ ಷಣಭಟ್ಟಾರಕದೇವರಾಜ್ಞೆಯಿನಿದಂ ಸಂಪೂರ್ಣಮಂ ಮಾಡಿದೆಂ || ನೆರೆದು ಶಕಾಬ್ಲೆಮಿಂದು ವಸು ನೇತ್ರ ಶಶಿಪ್ರಮಿತಂಗಳಾಗಿ ಸಂ ದಿರುತಿರೆಯುಂ ವಿಕಾರಿ ವತ್ಸರ ಚೈತ್ರ ವಿಶುದ್ಧಪಕ್ಷ ಭಾ ಸುರತರ ಪಂಚಮೀ ದಿವಸದಿಂದಿದು ಗೊಮ್ಮಟಸಾರವೃತ್ತಿಭಾ
ಸ್ಕರನೊಗೆದಂ ವಿನೇಯಜನ ಹೃತ್ಸರಸೀಜಮನುಳ್ಳಲರ್ಚುತಂ || ಎಂಬೆರಡು ವೃತ್ತಗಳಿಂದ ತಿಳಿದುಬರುವಂತೆ ಕೇಶವಣ್ಣನು ಧರ್ಮಭೂಷಣಭಟ್ಟಾರಕರ ಆದೇಶದಂತೆ ಜೀವಪ್ರದೀಪಿಕೆಯನ್ನು ಸಂಪೂರ್ಣ ಮಾಡಿರುವುದಾಗಿಯೂ, ಇದು ಶಕ ೧೨೮೫ರ ವಿಕಾರಿ ಸಂವತ್ಸರದ ಚೈತ್ರ ವಿಶುದ್ಧ ಪಂಚಮಿಯಂದು ಎಂದರೆ ಕ್ರಿ.ಶ. ೧೩೫೯ರಲ್ಲಿ ಪೂರ್ಣಗೊಂಡಿರುವುದಾಗಿಯೂ ಸ್ಪಷ್ಟವಾಗಿ ಹೇಳಿದ್ದಾನೆ. ಅಲ್ಲದೆ ಕೇಶವಣ್ಣನುಪ್ರತಿ ಅಧಿಕಾರದ ಅಂತ್ಯದಲ್ಲಿಯೂ "ಇದು ಭಗವದರ್ಹತ್ಪರಮೇಶ್ವರ ಚಾರು ಚರಣಾರವಿಂದದ್ವಂದ್ವ ವಂದನಾನಂದಿತ ಪುಣ್ಯಪುಂಜಾಯಮಾನ ಶ್ರೀಮದ್ರಾಯರಾಜಗುರುಮಂಡಲಾಚಾರ್ಯ ಸಕಲವಿದ್ವಜ್ಜನ ಚಕ್ರವರ್ತಿ ಶ್ರೀಮದಭಯಸೂರಿ ಸಿದ್ದಾಂತಚಕ್ರವರ್ತಿ ಶ್ರೀಪಾದಪಂಕಜರಜೋರಂಜಿತ ಲಲಾಟಪಟ್ಟಂ ಶ್ರೀಕೇಶವಣ್ಣ ವಿರಚಿತ ಗೊಮ್ಮಟಸಾರ ಕರ್ಣಾಟವೃತ್ತಿ ಜೀವತತ್ತ್ವಪ್ರದೀಪಿಕೆಯೊಳ್'' ಎಂಬ ಗ್ರಂಥ ಪ್ರಶಸ್ತಿಯಿಂದಲೂ ಇದು ದೃಢಪಡುತ್ತದೆ.
ಕೇಶವವರ್ಣಿಯು 'ಗೊಮ್ಮಟಸಾರ'ವಲ್ಲದೆ ನೇಮಿಚಂದ್ರರ 'ದ್ರವ್ಯಸಂಗ್ರಹ, ಅಮಿತಗತಿಯ ಸಂಸ್ಕೃತ 'ಶ್ರಾವಕಾಚಾರ' ಗ್ರಂಥಗಳಿಗೂ ಕನ್ನಡ ವ್ಯಾಖ್ಯಾನಗಳನ್ನು ರಚಿಸಿದ್ದಾನೆ. ೧೮೫೦ರಲ್ಲಿದ್ದ ದೇವಚಂದ್ರನು ತನ್ನ 'ರಾಜಾವಳಿ ಕಥಾಸಾರ'ದಲ್ಲಿ "ಸಾರತ್ರಯಕ್ಕೆ ಕೇಶವವರ್ಯರು ರಚಿಸಿದ ವ್ಯಾಖ್ಯಾನಗಳು" ಎಂದಿರುವುದು ಇದೇ ಕೇಶವಣ್ಣನನ್ನು ಕುರಿತು ಇರಬಹುದು. ಹಾಗಾಗಿ ಈತನಿಗೆ 'ಸಾರತ್ರಯವೇದಿ' ಎಂಬ ಬಿರುದು ಬಳಕೆಯಲ್ಲಿರುವುದು ಖಚಿತವಾಗುತ್ತದೆ. ಇದಕ್ಕೆ ಪೂರಕವಾಗಿ ಅಮಿತಗತಿಯ ಶ್ರಾವಕಾಚಾರ ವೃತ್ತಿಯಲ್ಲಿ ಪ್ರತಿ ಪರಿಚ್ಛೇದದ ಅಂತ್ಯದಲ್ಲಿಯೂ ಬರುವ 'ಇಂತು ಪರಮ ಜಿನಸಮಯ ಸಿದ್ದಾಂತ ಪೀಯೂಷಾರ್ಣವ ವಿವರ್ಧಿಷ್ಣು ಕುಮುದಬಾಂಧವ ಶ್ರೀಮದಭಯಸೂರಿ ಸಿದ್ದಾಂತ ಚಕ್ರವರ್ತಿ ಶ್ರೀಪಾದಪದ್ಮಾರಾಧಕನಪ್ಪ ಸಾರತ್ರಯವೇದಿ ಕೇಶನ್ನ ವಿರಚಿತಾಮಿತಗತಿ ಶ್ರಾವಕಾಚಾರ ವೃತ್ತಿಯೊಳು'' ಎಂದು ಹೇಳಿರುವುದನ್ನು ಗಮನಿಸಬಹುದು.
ಕೇಶವಣ್ಣನ ಸಮಕಾಲೀನನಾಗಿ ಸು. ೧೩೫೦ರಲ್ಲಿದ್ದ ಮೊದಲನೆಯ ಮಂಗರಾಜನು ತಾನು ರಚಿಸಿದ 'ಖಗೇಂದ್ರಮಣಿದರ್ಪಣ'' ಎಂಬ ವಿಷವೈದ್ಯಗ್ರಂಥದಲ್ಲಿ
( 300 -
Jain Education International
For Private & Personal Use Only
www.jainelibrary.org