________________
ಈ ಅಂತರ್‌ರಾಷ್ಟ್ರೀಯ ಪ್ರಾಕೃತ ಸೇಮಿನಾರ್‌ನ ಸಮಾರೋಪ ಸಮಾರಂಭದ ಅವಧಿಯಲ್ಲಿ ಸಂಗೋಷ್ಠಿಯಲ್ಲಿ ಭಾಗವಹಿಸಿರುವ ಸಮಸ್ತ ವಿದ್ವಾಂಸರನ್ನು ಸನ್ಮಾನಿಸಲಾಯಿತು. ಭಾಗವಹಿಸಿರುವ ಸಮಸ್ತ ವಿದ್ವಾಂಸರ ಪ್ರತಿನಿಧಿಯ ರೂಪದಲ್ಲಿ ಪ್ರೊ. ದಯಾನಂದ ಭಾರ್ಗವ ಹಾಗೂ ಪ್ರೊ.ಮಹಾವೀರ ರಾಜ ಗೆಲಡಾ ಅವರು ಸಂಗೋಷ್ಠಿಯಲ್ಲಿ ಪ್ರಸ್ತುತಪಡಿಸಿರುವ ವಿಚಾರಗಳನ್ನು ಈ ಕೆಳಗಿನಂತೆ ತಿಳಿಸಿದರುಃ1. ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಸಹಾಯದಿಂದ ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠ
ಆವರಣದಲ್ಲಿ ಶ್ರುತಕೇವಲಿ ಭದ್ರಬಾಹು ರಾಷ್ಟ್ರೀಯ ಪ್ರಾಕೃತ ಗ್ರಂಥಾಲಯ ಶೀಘ್ರದಲ್ಲಿ ಸ್ಥಾಪಿಸಬೇಕಾಗಿದೆ. ಅದರಲ್ಲಿ ವಿಶ್ವದಾದ್ಯಂತ ಪ್ರಕಟಗೊಂಡಿರುವ ಪ್ರಾಕೃತ, ಪಾಲಿ, ಅಪಭ್ರಂಶ, ಸಂಸ್ಕೃತ, ಹಿಂದಿ ಮತ್ತು ಕನ್ನಡ ಭಾಷೆಯ ಎಲ್ಲಾ ಸಂಶೋಧನಾತ್ಮಕ ಕೃತಿ ಲಭ್ಯವಿರಬೇಕು. ಇದರಿಂದ ಭಾರತೀಯ ಭಾಷೆಗಳ ತೌಲನಿಕ
ಅಧ್ಯಯನ ಮಾಡಲು ಸಹಕಾರವಾಗುತ್ತದೆ. 2. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯದಿಂದ ಸಂಪೂರ್ಣ ಅನುದಾನಿತ ಬಾಹುಬಲಿ ಪ್ರಾಕೃತ
ವಿದ್ಯಾಪೀಠ (ಬಾಹುಬಲಿ ಪ್ರಾಕೃತ ವಿಶ್ವವಿದ್ಯಾಲಯ)ವನ್ನು ಶ್ರವಣಬೆಳಗೊಳದಲ್ಲಿಯೇ ಸ್ಥಾಪಿಸಬೇಕು. ಅದರಲ್ಲಿ ಪ್ರಾಕೃತ, ಅಪಭ್ರಂಶ, ಸಂಸ್ಕೃತ, ಹಿಂದಿ, ಕನ್ನಡ ಭಾಷೆಯ ಜೈನಸಾಹಿತ್ಯ ದೊಂದಿಗೆ ಜೈನ ಇತಿಹಾಸ,
ಸಂಸ್ಕೃತಿ, ಕಲೆ, ಶಾಸನ ಮತ್ತು ಹಸ್ತಪ್ರತಿಶಾಸ್ತ್ರಗಳ ಶಿಕ್ಷಣ ಹಾಗೂ ಸಂಶೋಧನಾ ಕಾರ್ಯ ನಡೆಯಲಿದೆ. 3. ಭಾರತದ ಕೇಂದ್ರ ಸರ್ಕಾರದ ಮೂಲಕ ವಿದೇಶಗಳಲ್ಲಿ ನಿಯುಕ್ತಿಗೊಂಡಿರುವ ರಾಜದೂತ
(ಅಂಬಾಸಿಡರ್)ರೊಂದಿಗೆ ಪ್ರಾಕೃತ, ಸಂಸ್ಕೃತ, ಪಾಲಿ ಇತ್ಯಾದಿ ಪ್ರಾಚೀನ ಭಾಷೆ ಮತ್ತು ಅವುಗಳ ಸಾಹಿತ್ಯವನ್ನು ತಿಳಿದಿರುವ ಒಬ್ಬರು ಪ್ರಾಚ್ಯಭಾಷಾತಜ್ಞ (Expert in Indology) ರನ್ನು ಅವರ ಸಹಾಯಕ ಅಧಿಕಾರಿಯ ರೂಪದಲ್ಲಿ ನಿಯುಕ್ತಿಗೊಳಿಸಬೇಕು. ಆ ಅಧಿಕಾರಿಗಳು ವಿದೇಶಗಳಲ್ಲಿ ಭಾರತದ ಪ್ರಾಚೀನ
ಸಂಸ್ಕೃತಿಯ ಪ್ರಚಾರ - ಪ್ರಸಾರಕ್ಕೆ ಪ್ರಚೋದನೆ ನೀಡುತ್ತಾರೆ. 4. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸಾಮಾಜಿಕ ಸಂಶೋಧನಾ ಸಂಸ್ಥೆಗಳ ಸಹಕಾರದಿಂದ ಭಾರತದ
ಯಾವುದಾದರೊಂದು ಸಾಂಸ್ಕೃತಿಕ ನಗರದಲ್ಲಿ ಪ್ರಥಮ ವಿಶ್ವ ಪ್ರಾಕೃತ ಸಮ್ಮೇಳನವನ್ನು 2012ರಲ್ಲಿ ಆಯೋಜಿಸಬೇಕು, ಅದಕ್ಕಾಗಿ ಈಗಿನಿಂದಲೇ ಆಯೋಜಕ ಸಮಿತಿಯನ್ನು ನಿಯುಕ್ತಿಗೊಳಿಸಿ, ಅದರ ಕಾರ್ಯಾಲಯವನ್ನು ಸ್ಥಾಪಿಸಬೇಕು. ಸಂಗೋಷ್ಠಿಯಲ್ಲಿ ಆಗಮಿಸಿರುವ ಸಮಸ್ತ ದೇಶ ಮತ್ತು ವಿದೇಶದ ವಿದ್ವಾಂಸರು ಶ್ರೀಕ್ಷೇತ್ರದಲ್ಲಿ ವಿರಾಜಮಾನರಾಗಿರುವ ಪರಮಪೂಜ್ಯ ವಿದ್ಯಾವಾಚಸ್ಪತಿ ಆಚಾರ್ಯ ಶ್ರೀ 108 ಸುವಿಧಿ ಸಾಗರ ಜೀ ಮುನಿ ಮಹಾರಾಜರ ಪಾವನ ದರ್ಶನ ಪಡೆದು, ಅವರೊಡನೆ ವ್ಯಕ್ತಿಗತ ಧಾರ್ಮಿಕ ಚರ್ಚೆ ಮಾಡಿ, ಧರ್ಮಲಾಭ ಪಡೆದರು.
(Xxxii )
Jain Education International
For Private & Personal Use Only
www.jainelibrary.org